Customize readability
Aa

ಮನೆಯ ಅರ್ಥ?

All Rights Reserved ©

Summary

A story about belonging, longing for a home and the inner conflict of the narrator being shared with the audience

Genre
Drama
Author
Gharosh
Status
Complete
Chapters
1
Rating
n/a
Age Rating
13+

ಕಾಗೆಯ ತಳಮಳ

ಮನೆ, ಈ 'ಮನೆ' ಅನ್ನೋ ಪದದ ವಾಸ್ತವಿಕ ವ್ಯಾಖ್ಯಾನ ಏನಂತ ಯೋಚನೆ ಮಾಡಿದ್ದೀರಾ? ಗೊಂದಲ ಆಗ್ಬೇಡಿ, ಈ ನನ್ನ ಆಲೋಚನೆಯ ಅಲೆಗಳ ಹರಿವಲ್ಲಿ ಹಾಗೇ ನನ್ನ ಜೊತೆ ತೇಲಿ ಬನ್ನಿ. ಕಾವ್ಯಗಾರಿಕೆಗೆ ಕ್ಷಮೆ ಇರಲಿ, ಮರಳಿ ವಾಪಸ್ಸು ವಿಷಯಕ್ಕೆ ಬರೋಣ, 'ಮನೆ' ... ಇದರರ್ಥ ಏನು? ಬರೀ ಒಂದು ಕಟ್ಟಡವ? ಹಾಗಾದರೆ ಮನೆ ಇಲ್ಲದವರು ಕೂಡ ಮನೆಗೆ ಮರಳುತ್ತಾರೆ... ಕನಿಷ್ಠ ಪಕ್ಷ ಜನ ಹಾಗ ಹೇಳೋದನ್ನ ನಾನು ಕೇಳಿದ್ದೀನಿ. ಅಂದರೆ ಮನೆಯರ್ಥ ಕುಟುಂಬವಾ? ಕುಟುಂಬ ಇಲ್ದೇ ಇರೋರು ಕೂಡ ಮನೆಗೆ ಹೋಗ್ತೀನಂತಾರಲ್ಲಾ? ಹಾಗಾದ್ರೆ ಮನೆಯ ನಿಜವಾದ ಅರ್ಥ ಏನು? ಹೋಗ್ಲಿ ಮನೆ ಮತ್ತು ಮನೆ-ಅಲ್ಲ ಅನ್ನೋದರ ನಡುವಿನ ವ್ಯತ್ಯಾಸ ಏನು? ನಾನೊಂದು ಮನೆಯ ಉಣಗೋಲಿನ ಬಳಿ ನಿಂತರೆ ನಾನು ಆ ಮನೆಯ ಒಳಗಿದ್ದೀನೋ? ಹೊರಗಿದ್ದೀನೊ? ಹಾಗಾದರೆ ಆ ಮನೆಯ ದ್ವಾರಬಾಗ್ಲು ಮತ್ತು ಹೊರಗೋಡೆ ಮನೆಯ ಪರಿಧಿಯನ್ನ ನಿರ್ಧಾರ ಮಾಡುತ್ತದ? ಆ ಮನೆಗೆ ಬಾಗಿಲು ಮತ್ತು ಆ ಗೋಡೆ ಎರಡೂ ಇರ್ಲಿಲ್ಲ ಅಂದ್ಕೊಳಣ, ಒಳಗೆ ಅ ಮನೆಯ ಕುಟುಂಬವಿದೆ, ಉಣಗೋಲಿಗೊರಗಿ ನಾನಿಂತಿದ್ದೇನೆ, ಈಗ ನಾನು ಮನೆ ಹೊರಗಿದ್ದೀನಾ ಇಲ್ಲಾ ಒಳಗಿದ್ದೀನಾ?... ಅಂದ್ರೆ ತಲೆ ನೆಟ್ಟಗಿರೋರು ಖಂಡಿತ ಹೊರಗಿದ್ದೀನಿ ಅಂತ ಹೇಳ್ತಾರೆ, ಅದು ಸರಿ ಕೂಡ, ಅದೇ ನಾನು ನಿಂತಿದ್ದ ಅದೇ ಉಣಗೋಲಿನ ಬಳಿ ಆ ಮನೆಯ ಮಗ ನಿಂತಿದ್ದರೆ, ನಾನು ಎಲ್ಲಿದ್ದೀಯಾ ಅಂತ ಕೇಳಿದ್ರೆ ಅವನು ಸಹಜವಾಗಿ ನಾನು ಮನೆಯಲ್ಲಿದ್ದೇನೆ ಅಂತ ಹೇಳ್ತಾನೆ, ಆದ್ರೆ ಎರಡು ಕ್ಷಣಗಳ ಹಿಂದೆ ಅದೇ ಜಾಗದಲ್ಲಿ ನಾನಿದ್ದಾಗ ನಾನು ಹೊರಗಿನವನು, ಅದೇ ರಂಜನ್ ನಿಂತಿದ್ದರೆ ಅವನು ಮನೆಯೊಳಗಿನವನು, ಇದೊಂಥರ ಅನ್ಯಾಯವಲ್ವಾ? ಆ ಜಾಗದಲ್ಲಿ ನಾನು ನಿಂತಾಗ ಆ ಜಾಗ ಆ ಮನೆಯ ಮೇರೆಯೊಳಗೆ ಸೇರುವುದು ಹೇಗೆ? ನಾನೂ ಕೂಡ ಅವರಂತೆಯೇ ಅವರ ಸಹಮನುಷ್ಯನಲ್ವಾ? ನಾನೇನು ಪ್ರಾಣಿಯಾ? ಪ್ರಾಣಿ ಆದ್ರೇನು, ಪಶು ಪಕ್ಷಿಗಳಿಗೂ ಮನೆ ಇರ್ತವೆ, ಅದನ್ನ ಬಿಲ, ಗೂಡು ಅಂತೀವಿ.


ಗೂಡು ಅಂದಾಗ ನೆನಪಾಯಿತು, ಈ ಕೋಗಿಲೆಯ ಹಾಡು ಎಷ್ಟು ಇಂಪೋ, ಅದರ ಹಾಗು ಕಾಗೆಯ ನಡುವಿನ ಸಂಬಂಧ ಅಷ್ಟೇ ಭಯಾನಕ, ಕೋಗಿಲೆಗೆ ತನ್ನದೇ ಗೂಡು ಅಂತ ಇದ್ದರೂ, ಅದು ಕಾಗೆಯ ಗೂಡಿಗೆ ಹೋಗಿ ಗೂಡಿನೊಳಗಿರುವ ಕಾಗೆ ಮೊಟ್ಟೆಯನ್ನ ಹೊರಗೆ ಹಾಕಿ ತನ್ನ ಮೊಟ್ಟೆಯನ್ನ ಇಟ್ಟುಬರುತ್ತದಂತೆ, ಇದು ಕೋಗಿಲೆ ಮೊಟ್ಟೆ ಅಂತ ಗೊತ್ತಿಲ್ದೇಇರೋ ಕಾಗೆ ಕಷ್ಟಪಟ್ಟು ಆ ಕೋಗಿಲೆ ಮೊಟ್ಟೆನಾ ಮರಿ ಮಾಡುತ್ತಂತೆ, ಅದು ಸರಿ, ಆದ್ರೆ ಹುಟ್ಟಿದ ಆ ಕೋಗಿಲೆ ಮರಿಗೆ ತಾನು ಕೋಗಿಲೆ ಅಂತ ಅರಿವಾದಾಗ ತಾನ್ಯಾಕೆ ಕಾಗೆಗಳ ಕುಟುಂಬದಲ್ಲಿದ್ದೇನೆ ಅಂತ ಗೊಂದಲ ಆಗಲ್ವಾ? ಅದರೂ ವಯಸ್ಸಿಗೆ ಬಂದಮೇಲೆ ತನ್ನ ಅಸಲಿ ಹೆತ್ತವರು ಮಾಡಿದ ತಪ್ಪನ್ನೇ ಮುಂದುವರಿಸುತ್ತೆ, ಹ್ಮ್... ಎಷ್ಟೇ ಆದ್ರೂ ಕೋಗಿಲೆ ಕಲಾವಿದ, ನಾವು ಮನುಷ್ಯರಂತೆ, ಪಕ್ಷಿಗಳಲ್ಲೂ ಸೃಜನಕಲಾ ಉದ್ಯಮದವರ ವೈಯಕ್ತಿಕ ಜೀವನ ಬರೀ ಹುಳುಕೇ, ಈ ಕೊಗಿಲೇನೂ ತಾನು ಹುಟ್ಟಿಬಂದ ಕ್ರೌರ್ಯ ಕ್ಲೇಷದ ದುಷ್ಚಕ್ರವನ್ನ ಪುನರಾವರ್ತಿಸುತ್ತದೆ, ಅದಿರ್ಲಿ, ವಿಷಯಕ್ಕೆ ಬರೋಣ, ಈಗ ಈ ಕೋಗಿಲೆಯ ಮನೆ ಯಾವುದು? ಕಾಗೆಯದಾ, ಇಲ್ಲಾ ಕೊಗಿಲೆಯದಾ? ಒಂದು ಪಕ್ಷ ಆ ದಿನ ಕೋಗಿಲೆ ಹೊರಗೆಸೆದಿದ್ದ ಕಾಗೆ ಮೊಟ್ಟೆ ಅದೃಷ್ಟವಶಾತ್ ಪಾರಾಗಿ, ಕಾಗೆ ಮರಿಯೊಂದು ಹುಟ್ಟಿದರೇ? ಅದು ಹೇಗೋ ಬದುಕುಳಿದು, ಒಂದು ದಿನ ಈ ಕೋಗಿಲೆ ಮರಿಯ ಕಾಗೆ ಗೂಡಿನೆದುರು ಬಂದರೆ, ಆ ಗೂಡು ಕಾಗೆ ಮರಿಯದಾಗುತ್ತಾ ಇಲ್ವಾ? ಕೇಳೋಅಂತ ಪ್ರಶ್ನೆ ಅಲ್ವಾ? ಬೆಳೆದು ನಿಂತ ಕಾಗೆ ಮರಿ ಕೋಗಿಲೆ ಮರಿಯನ್ನ ಹೊರಗೆಸೆದು ಅದರ ಜಾಗವನ್ನ ಮತ್ತೆ ಆಕ್ರಮಿಸಿಕೊಳ್ಬೋದ? ಅದು ನ್ಯಾಯವಾ? ಒಂದು ಪಕ್ಷ ವಾಸ್ತವ ಕಥೆಯಲ್ಲಿ, ಕೋಗಿಲೆ ಬದ್ಲು ಕೋಗಿಲೆ ಮರೀನೇ ಆಗ್ಲೇ ಹುಟ್ಟಿರೋ ಕಾಗೆ ಮರೀನಾ ಹೊರಗೆಸೆದು ಅದರ ಜಾಗದಲ್ಲಿ ತಾನು ಕಾಗೆ ಮನೆ ಸೇರಿಕೊಂಡಿದ್ದರೇ, ಆಗ ಕಾಗೆ ಮರಿಯ ಪ್ರತೀಕಾರ ನ್ಯಾಯಸಮ್ಮತವಾ?


ಅಥವಾ... ಆ ಬದುಕುಳಿದ ಕಾಗೆ ಮರಿ ಹೇಗೋ ನಿಭಾಯಿಸಿಕೊಂಡು ತನ್ನದೇ ಮನೆ ಮಾಡಿಕೊಂಡು ಹೇಗೋ ಒಂದು ಬದುಕು ಕಟ್ಟಿಕೊಂಡಿತ್ತು ಅಂದುಕೊಳ್ಳೋಣ... ತನ್ನ ಪಾಡಿಗೆ ತಾನು ಈ ಕಾಗೆ ಕೋಗಿಲೆಗಳ ಸಂದಿಘ್ದತೆಯ ಉಸಾಬರಿಗೆ ಹೋಗದೆ ತನ್ನ ಹೊಸ ಕುಟುಂಬ ಕಟ್ಟಿಕೊಂಡಿತ್ತು ಅಂದ್ಕೊಳಣ, ದುರದೃಷ್ಟವಶಾತ್ ಅದರ ಜೀವನದಲ್ಲಿ ಮತ್ತೆ ಆ ಕೋಗಿಲೆ ಮರಿ ಪ್ರವೇಶಿಸಿ ತನ್ನ ಕೋಗಿಲೆತನದಿಂದ ಮತ್ತೆ ಕಾಗೆ ಮರಿಯಾ ಕುಟುಂಬದ ನಾಶಕೆ ಕಾರಣ ಆಯಿತು ಅಂದಿಟ್ಟುಕೊಳ್ಳಿ .... ಈಗ ಹೇಳಿ ಕಾಗೆ ಮರಿ ಕೋಗಿಲೆ ಮರಿಯಾ ಮೇಲೆ ಪ್ರತೀಕಾರ ತೀರಿಸಿಕೊಳ್ಳೋದು ಸರಿಯಾ ತಪ್ಪಾ? ಇದರಿಂದ ತನ್ನ ಹೊಸಾ ಕುಟುಂಬ ಮರಳಿ ದಕ್ಕುವುದಿಲ್ಲ ಅನ್ನೋದು ಕಾಗೆಗೂ ಗೊತ್ತಿದೆ, ಆದ್ರೆ ಕಾಗೆ ಹೆತ್ತವರು ಕಾಗೆ ಮರಿಯನ್ನ ವಾಪಸ್ಸು ಒಪ್ಕೊಳ್ತಾರಾ? ರಂಜನ್ ಪ್ಯಾಸೆಂಜರ್ ಸೀಟಿನಲ್ಲಿ ನಶೆಯಲ್ಲಿ ಮಲಗಿದ್ದಾನೆ... ತಮ್ಮ ಕೋಗಿಲೆ ಕಳೆದು ಹೋಗಲು ತಾನೇ ಕಾರಣ ಅಂತ ಗೊತ್ತಾದ ಮೇಲೂ ಕಾಗೆಗಳು ಕಾಗೆ ಮರಿಯನ್ನ ಮನೆಯವನು ಅಂತ ಒಪ್ಕೊಳ್ತಾರ? ಹೇಳಿ ಕಾಗೆಯ ಮನೆ ಯಾವುದು? ಮನೆ ಅನ್ನುವುದರ ಅರ್ಥವಾದರೂ ಏನು?

Let Gharosh know what you thought about this chapter!
Love this

0

Love this

Funny

0

Funny

Spicy

0

Spicy

Suspenseful

0

Suspenseful

Emotional

0

Emotional

Profound

0

Profound

Heartwarming

0

Heartwarming

Shocking

0

Shocking

Good Writing

0

Good Writing

Compelling Plot

0

Compelling Plot

Great Character

0

Great Character

Strong Dialog

0

Strong Dialog

Further Recommendations

Milky Treasures on a Healing Love

Booklover_rdx: A different but good story. Basically a love story with a twist- i enjoyed every word of it

Read Now
The Easter Bunny

Lynne: Beautiful short story with a happy ending.luved it.

Read Now
Welded Shut

Sydne: Very heartwarming story. It has real emotions. The main female character reminds me somewhat of myself having to deal with childhood trauma that just leads you down a path of more bad decisions until one day you make a decision that changes everything for the better and it’s hard for to realize that...

Read Now
Bloodlines

Ku_Rolet: The novel was good, and I really enjoyed reading it. I love the leads and their bond, but I have one question that confused me. How could Tristan have been dreaming about his mate since he was a child if Omara was already mated to someone else before him? If Kyle had accepted Omara, would Tristan ne...

Read Now
Fated to My Ex- Best Friend

Victoria: I liked how you described everything so clearly. It made the story very immersive. Do you plan to continue this story further?

Read Now
Broken Halos MC

Lynn Hamilton: Author does an amazing job of creating a story that will make you feel like you’re there and part of the story. Very descriptive and well written. The book has a great plot that makes it interesting and coming back for more.

Read Now
Off limits to fate, My Alpha, my sin

Jayne: Loving this book, its comp.usive reading.

Read Now
Ruthless Lord

Bethel Stephanie: This was a beautiful story I can't believe I finished book 1, I cant wait for book 2, it's beautiful. The story abd characters are beautiful 💕💕💕

Read Now
Rebuilding After Betrayal

Adetutu Akinfaderin: I like the plot of the story in general ,though it’s a bit sad it isnt so long as I would have wanted but that’s fine , I’ll definitely recommend it to my friends whose name is actually Shay 😁😁

Read Now